ಹಲೋ ಸ್ನೇಹಿತರೇ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ತಾಲ್ಲೂಕುವಾರು ಪ್ರತಿ ತಿಂಗಳ ರದ್ದಾದ ಪಡಿತರ ಚೀಟಿ/ರೇಷನ್ ಕಾರ್ಡ್ ಪಟ್ಟಿಯನ್ನು ಇಲಾಖೆಯ ಅಧಿಕೃತ ವೆಬ್ಸೈಟ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, ಆ ಪಟ್ಟಿಯಲ್ಲಿ ನಿಮ್ಮ ಹೆಸರಿದ್ಯಾ ಈಗಲೇ ಚೆಕ್ ಮಾಡಿ. ಇದರ ಕುರಿತಾದ ಇನ್ನಷ್ಟು ಮಾಹಿತಿಗಾಗಿ ಈ ಲೇಖನವನ್ನು ಕೊನೆವರೆಗೂ ಓದಿ..
ಪ್ರತಿ ತಿಂಗಳ ರದ್ದಾದ ಪಡಿತರ ಚೀಟಿ/ರೇಷನ್ ಕಾರ್ಡ ಪಟ್ಟಿಯನ್ನು ಇಲಾಖೆಯ ಅಧಿಕೃತ ವೆಬ್ಸೈಟ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಪಡಿತರ ಚೀಟಿ ಹೊಂದಿರುವ ಗ್ರಾಹಕರು ಇಲಾಖೆಯ ಅಧಿಕೃತ ಜಾಲತಾಣ ಭೇಟಿ ಮಾಡಿ ಹೇಗೆ ಈ ಪಟ್ಟಿಯನ್ನು ನೋಡಬವುದು ಮತ್ತು ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ. ರೇಷನ್ ಕಾರ್ಡ್ ಹೊಂದಿರುವ ಗ್ರಾಹಕರು ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯೋ? ಇಲ್ಲವೋ? ಎಂದು ನಿಮ್ಮ ಮೊಬೈಲ್ ನಲ್ಲೇ ನೋಡಿ ಖಚಿತಪಡಿಸಿಕೊಳ್ಳಬವುದು.
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಜಾರಿಯಾದ ಬಳಿಕ ಈ ಯೋಜನೆಯಡಿ ಸೌಲಭ್ಯ ಪಡೆಯಲು ಪಡಿತರ ಚೀಟಿಯನ್ನು ದುರ್ಬಳಕೆ ಮಾಡುವವರ ಸಂಖ್ಯೆ ಹೆಚ್ಚುತ್ತಿರುವುದನ್ನು ಗಮನಿಸಿದ ಇಲಾಖೆಯು ಕಳೆದ 3-4 ತಿಂಗಳಲ್ಲಿ ಕಟ್ಟುನಿಟ್ಟಿನ ಮಾರ್ಗಸೂಚಿಯನ್ನುಅನುಸರಿಸಿ ದೊಡ್ಡ ಸಂಖ್ಯೆಯ ಅನರ್ಹ ಪಡಿತರ ಚೀಟಿಗಳನ್ನು ರದ್ದು ಮಾಡಿ ಪಟ್ಟಿ ಬಿಡುಗಡೆಗೊಳಿಸಿದೆ.
ಮೊಬೈಲ್ ನಲ್ಲಿ ಪಟ್ಟಿಯನ್ನು ನೋಡುವ ವಿಧಾನ:
ಪಡಿತರ ಚೀಟಿ ಹೊಂದಿರುವ ಗ್ರಾಹಕರು ತಮ್ಮ ಮೊಬೈಲ್ ಮೂಲಕ ಬೆಳಿಗ್ಗೆ 8-00 ರಿಂದ ರಾತ್ರಿ 8-00 ಗಂಟೆಯ ನಡುವೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಈ https://ahara.kar.nic.in ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಿ ತಾಲ್ಲೂಕುವಾರು ರದ್ದಾದ ರೇಷನ್ ಕಾರ್ಡ್ ಪಟ್ಟಿಯನ್ನು ನೋಡಬಹುದು. ಈ ಕೆಳಗಿನ ವಿಧಾನ ಅನುಸರಿಸಿ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯೋ? ಇಲ್ಲವೋ? ಎಂದು ಪರೀಶಿಲಿಸಬವುದು.
ಇದನ್ನೂ ಸಹ ಓದಿ : ಕೈಗೆಟಕುವ ಬೆಲೆಯಲ್ಲಿ ಸಿಗಲಿದೆ ಜಿಯೋ ಲ್ಯಾಪ್‌ಟಾಪ್.! ಬೆಲೆ ಕೇಳಿದ್ರೆ ತಕ್ಷಣ ಖರೀದಿಸುವಿರಿ
Step-1: ಮೊದಲಿಗೆ ಈ ಲಿಂಕ್ cancelled ration card list ಮೇಲೆ ಕ್ಲಿಕ್ ಮಾಡಿ ಇಲಾಖೆಯ ಅಧಿಕೃತ ವೆಬ್ಸೈಟ್ ಭೇಟಿ ಮಾಡಬೇಕು. ನಂತರ “ಇ-ಪಡಿತರ ಚೀಟಿ” ಬಟನ್ ಮೇಲೆ ಕ್ಲಿಕ್ ಮಾಡಿಕೊಂಡು ಈ ವಿಭಾಗದಲ್ಲಿ 6 ನೇಯ ಆಯ್ಕೆಯಾದ “ರದ್ದುಗೊಳಿಸಲಾದ/ತಡೆಹಿಡಿಯಲಾದ ಪಟ್ಟಿ” ಬಟನ್ ಮೇಲೆ ಕ್ಲಿಕ್ ಮಾಡಬೇಕು.
Step-2: “ರದ್ದುಗೊಳಿಸಲಾದ/ತಡೆಹಿಡಿಯಲಾದ ಪಟ್ಟಿ” ಆಯ್ಕೆಯ ಮೇಲೆ ಕ್ಲಿಕ್ ಮಾಡಿಕೊಂಡು ಈ ಪೇಜ್ ನಲ್ಲಿ ಪ್ರಥಮದಲ್ಲಿ District, Taluk, Month, Year ಅನ್ನು select ಮಾಡಿಕೊಂಡು “Go” ಬಟನ್ ಮೇಲೆ ಕ್ಲಿಕ್ ಮಾಡಿದರೆ ಸಾಕು ನಿಮ್ಮ ತಾಲ್ಲೂಕಿನ ರದ್ದಾದ ಅಥವಾ ತಡೆಹಿಡಿಯಲಾದ ರೇಷನ್ ಕಾರ್ಡ್ ಪಟ್ಟಿ ತೋರಿಸುತ್ತದೆ.
ಫಲಾನುಭವಿಗಳು ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯೋ? ಇಲ್ಲವೋ ಎಂದು ನೋಡಲು ಈ ಪೇಜ್ ನ ಕೊನೆಯಲ್ಲಿ ಕಾಣುವ ಪುಟದ ಸಂಖ್ಯೆಯ(1.2.3.4…)ಮೇಲೆ ಕ್ಲಿಕ್ ಮಾಡಿ ಪಟ್ಟಿಯನ್ನು ಸಂಪೂರ್ಣವಾಗಿ ಪರೀಶಿಲಿಸಬೇಕು.
ಪಟ್ಟಿಯಲ್ಲಿ ಯಾವೆಲ್ಲ ಮಾಹಿತಿ ಲಭ್ಯ?
ಈ ಮೇಲಿನ ವಿಧಾನವನ್ನು ಅನುಸರಿಸಿ ತಿಂಗಳು/ತಾಲ್ಲೂಕುವಾರು ರದ್ದಾದ/ತಡೆಯಿಡಿಯಲಾದ ಪಡಿತರ ಚೀಟಿಯ ಪಟ್ಟಿಯ ವಿವರವನ್ನು ಪಡೆದ ಬಳಿಕ ಈ ಪಟ್ಟಿಯಲ್ಲಿ ಫಲಾನುಭವಿಯ ರೇಷನ್ ಕಾರ್ಡ್ RC Number, ಹೆಸರು, ರದ್ದಾದ ದಿನಾಂಕ, ರೇಷನ್ ಕಾರ್ಡ್ ರದ್ದುಗೊಳಿಸಲು ಅಥವಾ ತಡೆಯಿಡಿಯಲು ಕಾರಣದ ವಿವರವನ್ನು ನೋಡಬಹುದಾಗಿದೆ.
ಅರ್ಹರಿದ್ದರು ರದ್ದಾದರೆ ಏನು ಮಾಡಬೇಕು?
ಒಂದೊಮ್ಮೆ ನಿಮ್ಮ ತಿಳಿಸಿದ ವಿಧಾನವನ್ನು ಅನುಸರಿಸಿ ಪಟ್ಟಿಯನ್ನು ಸಂಪೂರ್ಣವಾಗಿ ಚೆಕ್ ಮಾಡಿದಾಗ ಆ ಪಟ್ಟಿಯಲ್ಲಿ ನಿಮ್ಮ ಹೆಸರು ತೋರಿಸಿದರೆ ನೀವು ಪಡಿತರ ಚೀಟಿ ಪಡೆಯಲು ಅರ್ಹರಿದಲ್ಲಿ ಅಗತ್ಯ ದಾಖಲಾತಿಗಳ ಸಮೇತ ನಿಮ್ಮ ತಾಲ್ಲೂಕಿನ ಆಹಾರ ಇಲಾಖೆಯ ಕಚೇರಿಯನ್ನು(Food inspector office) ಭೇಟಿ ಮಾಡಿ ನಿಮ್ಮ ರೇಷನ್ ಕಾರ್ಡ್ ಅರ್ಜಿಯನ್ನು ಮರು ಪರೀಶಿಲನೆ ಮಾಡುವಂತೆ ಅರ್ಜಿ ಸಲ್ಲಿಸಬೇಕಾಗುತ್ತದೆ.
ಇತರೆ ವಿಷಯಗಳು:
ಡಿಸೆಂಬರ್ ಸಾಲ ಮನ್ನಾ ಪಟ್ಟಿ!! 3 ಲಕ್ಷ ರೈತರ 6000 ಕೋಟಿ ಸಾಲ ಮನ್ನಾ
ನಿರುದ್ಯೋಗಿ ಯುವಕರಿಗೆ ಗುಡ್ ನ್ಯೂಸ್!! ಕೆಂದ್ರದಿಂದ ನಿಮಗೆ ಸ್ವಂತ ಉದ್ಯೋಗ ಮಾಡಲು 50 ಲಕ್ಷ ಸಹಾಯಧನ
ಡಿಪ್ಲೊಮಾ ಪಾಸಾಗಿದ್ರೆ ಸಾಕು, ಬಜಾಜ್ ಕಂಪನಿಯಲ್ಲಿ ಉದ್ಯೋಗ ಪಡೆಯುವ ಅವಕಾಶ!! ಹೀಗೆ ಅರ್ಜಿ ಸಲ್ಲಿಸಿ