ಹಲೋ ಸ್ನೇಹಿತರೇ, ತಮ್ಮದೇ ಆದ ಸ್ವಂತ ಆಸ್ತಿ ಮನೆ ಜಮೀನು ಹೊಂದಿರಬೇಕು ಎನ್ನುವ ಕನಸು ಹಲವರದ್ದು ಆದರೆ ಅದನ್ನು ಈಡೇರಿಸಿಕೊಳ್ಳುವುದಕ್ಕೆ ಬೇಕಾಗಿರುವ ಏಕೈಕ ಔಷಧ ಅಂದರೆ ಹಣ. ಕಾಸಿದ್ರೆ ಕೈಲಾಸ ಎನ್ನುವಂತೆ ಹಣ ಇಲ್ಲದೆ ಯಾವುದು ಸಾಧ್ಯ ಆಗುವುದಿಲ್ಲ. ಹಾಗಾಗಿ ಸ್ವಂತ ಜಮೀನಿನ ಕನಸು ಹಲವರಿಗೆ ಕನಸಾಗಿ ಉಳಿದುಬಿಡುತ್ತದೆ. ಇನ್ನು ಮುಂದೆ ಚಿಂತೆ ಮಾಡುವ ಅಗತ್ಯವಿಲ್ಲ.
ಸ್ವಂತ ಜಮೀನು ಇಟ್ಟುಕೊಳ್ಳಬೇಕು ಎಂದು ಬಯಸುವವರಿಗೆ ಸರ್ಕಾರ ಸಹಾಯಧನ ನೀಡಲು ಮುಂದಾಗಿದೆ. ಸಾಲ ಸೌಲಭ್ಯದ ಜೊತೆಗೆ ಸಬ್ಸಿಡಿ ಕೂಡ ನೀಡಲಿದ್ದು ಈ ಯೋಜನೆಯ ಬಗ್ಗೆ ತಿಳಿದುಕೊಂಡು ನೀವು ಅರ್ಹರಾಗಿದ್ದರೆ ತಕ್ಷಣವೇ ಅರ್ಜಿ ಸಲ್ಲಿಸಿ.
ಭೂ ಒಡೆತನ ಯೋಜನೆ:
ಭೂ ಒಡೆತನ ಯೋಜನೆ ಅಡಿಯಲ್ಲಿ ಭೂ ರಹಿತ ಮಹಿಳಾ ಕೃಷಿಕರು ತಾವು ವಾಸಿಸುವ ಸ್ಥಳದಿಂದ 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿ 2 ಎಕರೆ ಖುಷ್ಕ ಅಥವಾ ಒಂದು ಎಕರೆ ತರಿ ಜಮೀನು ಖರೀದಿಸಲು ಸರ್ಕಾರ ಸಹಾಯಧನ ನೀಡುತ್ತದೆ.
ಈ ಸಹಾಯಧನದ ಮೊತ್ತ 25 ಲಕ್ಷ ಹಾಗೂ 20 ಲಕ್ಷ ರೂಪಾಯಿ. ಇದರಲ್ಲಿ 50% ನಷ್ಟು ಫಲಾನುಭವಿಗಳು ಪಾವತಿಸಿದರೆ ಇನ್ನು 50% ನಷ್ಟು ಸರ್ಕಾರ ಸಬ್ಸಿಡಿ ನೀಡುತ್ತದೆ. ಯೋಜನೆಯ ಅಡಿಯಲ್ಲಿ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ 25 ಲಕ್ಷ ರೂಪಾಯಿಗಳ ಸಾಲ ಹಾಗೂ ಇನ್ನುಳಿದ ಜಿಲ್ಲೆಗಳಿಗೆ 20 ಲಕ್ಷ ರೂಪಾಯಿಗಳ ಸಾಲವನ್ನು ಸರ್ಕಾರ ಮಂಜೂರು ಮಾಡಲಿದೆ.
ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು:
- ಆಧಾರ್ ಕಾರ್ಡ್
- ಆದಾಯ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ
- ಅರ್ಜಿದಾರರ ಫೋಟೋ
- ಕೃಷಿ ಕಾರ್ಮಿಕರ ದೃಢೀಕರಣ ಪತ್ರ
ಇವಿಷ್ಟು ಮೂಲಭೂತ ದಾಖಲೆಗಳಾಗಿದ್ದು ಹೆಚ್ಚಿನ ಮಾಹಿತಿಯನ್ನು ನೀವು ಆನ್ಲೈನ್ ಪೋರ್ಟಲ್ನಲ್ಲಿ ತಿಳಿದುಕೊಳ್ಳಬಹುದು.
ಇದನ್ನೂ ಸಹ ಓದಿ : ಮಗಳಿದ್ದು ಬಡವರಾಗಿದ್ದರೆ ಮದುವೆಗೆ ಚಿಂತಿಸಬೇಕಿಲ್ಲ!! ಸರ್ಕಾರದಿಂದ ಸಿಗತ್ತೆ 51 ಸಾವಿರ ಉಚಿತ
ಭೂ ಒಡೆತನ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ನೀವು ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದಾಗಿದ್ದು, ಅಧಿಕೃತ ವೆಬ್ಸೈಟ್ https://sevasindhu.karnataka.gov.in/Sevasindhu/Kannada?ReturnUrl=%2F ಗೆ ಭೇಟಿ ನೀಡಿ. ಅರ್ಜಿ ಹಾಕುವುದಕ್ಕೂ ಮೊದಲು ನಿಯಮಗಳನ್ನು ತಿಳಿದುಕೊಂಡು ನಂತರ ಅರ್ಜಿ ಫಾರಂ ಭರ್ತಿ ಮಾಡಿ ಸರಿಯಾದ ದಾಖಲೆಗಳನ್ನು ನೀಡಿ.
ನೀವು ಅರ್ಹರಾಗಿದ್ದರೆ ತಕ್ಷಣವೇ ಸಾಲ ಮಂಜೂರಾಗುತ್ತದೆ. ಒಂದು ವೇಳೆ ಅನರ್ಹರು ಎಂದು ಕಂಡುಬಂದರೆ ಸಾಲ ಮಂಜೂರಾತಿಯ ಯಾವುದೇ ಹಂತದಲ್ಲಿ ಸಾಲವನ್ನು ಸ್ಥಗಿತಗೊಳಿಸಬಹುದು.
ಯೋಜನೆ ಪ್ರಯೋಜನ ಪಡೆದುಕೊಳ್ಳಲು ಯಾರು ಅರ್ಹರು?
ಭೂ ಒಡೆತನ ಯೋಜನೆಯ ಸಾಲ ಸೌಲಭ್ಯವನ್ನು ಪಡೆದುಕೊಳ್ಳಲು ಮುಖ್ಯವಾಗಿ ಈ ಕೆಳಗಿನ ನಿಗಮದ ಅಡಿಯಲ್ಲಿ ಬರುವ ಸಮುದಾಯಗಳು ಅರ್ಜಿ ಸಲ್ಲಿಸಬಹುದಾಗಿದೆ. ಇದರ ಜೊತೆಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರಿಗೂ ಕೂಡ 2023-24ನೇ ಸಾಲಿನಲ್ಲಿ ಭೂ ಒಡೆತನ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.
ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ, ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಆದಿಜಾಂಬವ ಅಭಿವೃದ್ಧಿ ನಿಗಮ, ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಹಾಗೂ ಪರಿಶಿಷ್ಟ ಜಾತಿ ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮದ ಸಮುದಾಯದವರು ಅರ್ಜಿ ಸಲ್ಲಿಸಬಹುದಾಗಿದೆ.
ಭೂ ಒಡೆತನ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 15, 2023. ಕೇವಲ ಐದು ದಿನಗಳು ಮಾತ್ರ ಅವಕಾಶವಿದ್ದು ಅರ್ಹರು ತಕ್ಷಣವೇ ಅರ್ಜಿ ಸಲ್ಲಿಸಿ ಸರ್ಕಾರದ ಸಹಾಯಧನ ಪಡೆದು ಸ್ವಂತ ಜಮೀನು ಖರೀದಿಸಿ.
ಇತರೆ ವಿಷಯಗಳು:
ರೈತರಿಗೆ 90% ರಿಯಾಯಿತಿ ದರದಲ್ಲಿ ಸಿಗಲಿದೆ ಸೋಲಾರ್ ಪಂಪ್!! ಈ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಿ
ಯಾವುದೇ ಪರೀಕ್ಷೆ ಇಲ್ಲದೆ ಬೆಸ್ಕಾಂ 400 ಹುದ್ದೆಗಳಿಗೆ ಅರ್ಜಿ ಆಹ್ವಾನ.! ಈ ದಿನಾಂಕದೊಳಗೆ ಅರ್ಜಿ ಸಲ್ಲಿಸಿ
ನವೋದಯ ವಿದ್ಯಾಲಯದಲ್ಲಿ ಭರ್ಜರಿ ನೇಮಕಾತಿ..! 80051+ ಖಾಲಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟ