ಹಲೋ ಸ್ನೇಹಿತರೇ, ರಾಜ್ಯ ಸರ್ಕಾರದಿಂದ ಒಂದು ಹೊಸ ಯೋಜನೆ ಜಾರಿಗೆ ಬಂದಿದೆ, ಎಲ್ಲರಿಗೂ ಇದು ಶುಭ ಸುದ್ದಿ. ಕೇವಲ ಒಂದು ಲಕ್ಷಕ್ಕೆ ಬಡವರಿಗೆ ಮನೆಯನ್ನು ನೀಡಲಾಗುವುದು. ಇದು ಕಾಂಗ್ರೇಸ್‌ನ 6 ನೇ ಗ್ಯಾರಂಟಿ ಯೋಜನೆಯಾಗಿದೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಅವರು ತಿಳಿಸಿದ್ದಾರೆ. ಇದರ ಕುರಿತಾದ ಇನ್ನಷ್ಟು ಮಾಹಿತಿಗಾಗಿ ಈ ಲೇಖನವನ್ನು ಕೊನೆವರೆಗೂ ಓದಿ..
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಬಡವರಿಗೆ ಮನೆ ಹಂಚುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಫಲಾನುಭವಿಗಳು ಕೇವಲ 1 ಲಕ್ಷ ರೂ. ಗಳನ್ನು ಪಾವತಿಸಿ ಮನೆಯನ್ನು ಪಡೆಯಬಹುದೆಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಟೆಂಡರ್ ಆಹ್ವಾನಿಸಿ ಅನುಷ್ಠಾನಗೊಳಿಸುತ್ತಿರುವ ಮನೆಗಳ ಪೈಕಿ ಮುಕ್ತಾಯ ಹಂತದಲ್ಲಿರುವ 48,796 ಮನೆಗಳ ಪ್ರತಿ ಫಲಾನುಭವಿಗಳಿಂದ 1 ಲಕ್ಷ ರೂ. ಮಾತ್ರ ಸಂಗ್ರಹಿಸಿ ಉಳಿದ ಮೊತ್ತವನ್ನು ರಾಜ್ಯ ಸರ್ಕಾರದಿಂದ ಭರಿಸಲು ಸಂಪುಟ ತಿರ್ಮಾನಿಸಿದೆ.
ಇದನ್ನೂ ಸಹ ಓದಿ : ಸಿಲಿಕಾನ್ ಸಿಟಿ ಮಂದಿಗೆ ಗುಡ್ ನ್ಯೂಸ್!! ಇನ್ಮುಂದೆ BMTC ಬಸ್‌ನಲ್ಲಿ ನಿಲ್ದಾಣಗಳ ಆಡಿಯೋ ಪ್ರಕಟಣೆ
ದೇಶದಲ್ಲಿ ಸ್ವಂತ ಮನೆ ಇಲ್ಲದೆ ಬಾಡಿಗೆ ಮನೆಯಲ್ಲಿ ಅಥವಾ ಬಾಡಿಗೆ ಮನೆಯಲ್ಲಿ ವಾಸಿಸುವುದಕ್ಕೂ ಕೂಡ ಹಣ ಇಲ್ಲದೆ ಗುಡಿಸಿಲಿನಲ್ಲಿ ವಾಸವಾಗಿರುವ ಸಾಕಷ್ಟು ಕುಟುಂಬಗಳು ಇವೆ. ಮನೆ ಎನ್ನುವುದು ಪ್ರತಿಯೊಬ್ಬರ ಮೂಲಭೂತ ಅವಶ್ಯಕತೆಗಳಲ್ಲಿ ಒಂದು, ಹಾಗಾಗಿ ಎಲ್ಲರೂ ಕೂಡ ಸ್ವಂತ ಸೂರು ಹೊಂದಿರಬೇಕು ಎನ್ನುವುದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಉದ್ದೇಶವಾಗಿದೆ.
ಇದೇ ಕಾರಣಕ್ಕೆ ಬೇರೆ ಬೇರೆ ಪ್ರದೇಶಗಳಿಗೆ ಅನುಗುಣವಾಗುವಂತೆ ಬೇರೆ ಬೇರೆ ರೀತಿಯ ವಸತಿ ಯೋಜನೆಗಳನ್ನು ಬಿಡುಗಡೆ ಮಾಡಲಾಗಿದೆ, ಅತಿ ಕಡಿಮೆ ಬೆಲೆಗೆ ಸರ್ಕಾರದಿಂದಲೇ ಮನೆ ಪಡೆದುಕೊಳ್ಳುವ ವಸತಿ ಯೋಜನೆಗಳು ಜಾರಿಯಲ್ಲಿ ಇದೆ.
ಇತರೆ ವಿಷಯಗಳು:
ಯುವ ನಿಧಿ ಫಲಾನುಭವಿಗಳಿಗೆ ಜನವರಿ 12 ರಂದು ಡಿಬಿಟಿ ಮೂಲಕ ದುಡ್ಡು!! ಏನೆಲ್ಲಾ ಕಂಡೀಷನ್ ಗೊತ್ತಾ?
ಗ್ರಾಮೀಣ ಜನರಿಗೆ ಗುಡ್ ನ್ಯೂಸ್!! ಜಾಬ್ ಕಾರ್ಡ್ ಇದ್ದವರಿಗೆ ಪ್ರತಿ ತಿಂಗಳ ವೇತನ ಹೆಚ್ಚಳ